ಬೃಂದಾವನಕೆ ಹಾಲನು ಮಾರಲು / Brundavanake haalanu maaralu

Earlier post had wrongly mentioned Gopalakrishna Adiga as the poet. After a reader pointed this out, with the help of additional reference, the mistake has been rectified. Summary : Rashtrakavi KuVemPu, through his versatile play of words tells us about a conversation happening between beautiful ladies(mostly Gopikas). They are trying to sell milk to Lord Krishna, who himself is a cowherd in Brundavana (Tulasi forest). Selling milk is only an excuse … Continue reading ಬೃಂದಾವನಕೆ ಹಾಲನು ಮಾರಲು / Brundavanake haalanu maaralu

ತರವಲ್ಲ ತಗಿ ನಿನ್ನ ತಂಬೂರಿ / Taravalla tagi ninna tamburi

Summary : Saint poet Shishunala Sharif of 19th century Karnataka uses the humble Tamburi to tell the masses to not just pluck the strings but know how to play to the tune, understand the music and the feeling behind it else don’t play, correct yourself when wrong, there is one for every level of intellect, its for the one who knows life, its even for the … Continue reading ತರವಲ್ಲ ತಗಿ ನಿನ್ನ ತಂಬೂರಿ / Taravalla tagi ninna tamburi

ಯಾಕೊ ಕಾಣೆ ರುದ್ರ ವೀಣೆ / Yaako kaane rudra veene

Summary has been updated to indicate that its an interpretation only and not a literal translation of poet’s work. Summary : Dattatreya Ramachandra Bendre, Kannada‘s most versatile & gifted poet, often wrote poetry filled with symbolic references. This is my interpretation of what the poet is trying to say: ‘He is contemplating on prevalent social, political and emotional unrest. Rudra Veena is an ancient Indian classical instrument. Poet symbolizes … Continue reading ಯಾಕೊ ಕಾಣೆ ರುದ್ರ ವೀಣೆ / Yaako kaane rudra veene

ಜೋಗದ ಸಿರಿ ಬೆಳಕಿನಲ್ಲಿ(ನಿತ್ಯೋತ್ಸವ) / Jogada siri belakinalli (Nityotsava)

ಶೀರ್ಷಿಕೆ : ಜೋಗದ ಸಿರಿ ಬೆಳಕಿನಲ್ಲಿ(ನಿತ್ಯೋತ್ಸವ) ಕವಿ :  ಕೆ. ಎಸ್. ನಿಸಾರ್ ಅಹಮದ್ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ ಸದ್ವಿಕಾಸಶೀಲ ನುಡಿಯ ಲೋಕಾವೃತ … Continue reading ಜೋಗದ ಸಿರಿ ಬೆಳಕಿನಲ್ಲಿ(ನಿತ್ಯೋತ್ಸವ) / Jogada siri belakinalli (Nityotsava)

ನೋಡವಳಂದವ / Nodavalandava

ಶೀರ್ಷಿಕೆ : ನೋಡವಳಂದವ ಕವಿ : ಕನ್ನಡ ಜನ ಪ್ರಾಕಾರ : ಜಾನಪದ ಗೀತೆ ಭಾಷೆ : ಕನ್ನಡ ನೋಡವಳಂದವ ಮೊಗ್ಗಿನ ಮಾಲೆ ಚಂದವ ಬೆಟ್ಟ ಬಿಟ್ಟಿಳಿಯುತ್ತ ಬಿಟ್ಟಾಳೇ ಮಂಡೆಯ ಉಟ್ಟಿರೊ ಲಂಗ ಹುಲಿ ಚರ್ಮ ನೋಡವಳಂದವ ಉಟ್ಟಿರೊ ಲಂಗ ಹುಲಿ ಚರ್ಮ ಚಾಮುಂಡಿ ಬೆಟ್ಟ ಬಿಟ್ಟಿಳಿಯೋ ಸಡಗರ ನೋಡವಳಂದವ ಮೊಗ್ಗಿನ ಮಾಲೆ ಚಂದವ ತಾಯಿ ಚಾಮುಂಡಿಯ ಬಾಣಾಸುರದ ಮ್ಯಾಲೆ ಜಾಗರವಾಡೌನೆ  ಎಳೆನಾಗ ನೋಡವಳಂದವ ಜಾಗರವಾಡೌನೆ  ಎಳೆನಾಗ ಹೆಡೆಸರ್ಪ ತಾಯಿ ಚಾಮುಂಡಿಗೆ ಬಿಸಿಲೆಂದು ನೋಡವಳಂದವ ಮೊಗ್ಗಿನ ಮಾಲೆ ಚಂದವ ತಾಳೆಹೂವ್ ತಂದೀವ್ನಿ ತಾಳ್ತಾಯೆ ನನ್ನವ್ವ ಮೇಗಲ ತೋಟದ ಮರುಗವ ನೋಡವಳಂದವ ಮೇಗಲ ತೋಟದ ಮರುಗವ ತಂದೀವ್ನಿ ಒಪ್ಪಿಸಿಕೊಳ್ಳೆ … Continue reading ನೋಡವಳಂದವ / Nodavalandava

ದೋಣಿ ಸಾಗಲಿ, ಮುಂದೆ ಹೋಗಲಿ / Doni saagali, mundhe hogali

ಶೀರ್ಷಿಕೆ : ದೋಣಿ ಸಾಗಲಿ, ಮುಂದೆ ಹೋಗಲಿ ಕವಿ : ಕುವೆಂಪು ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ    ||ದೋಣಿ ಸಾಗಲಿ|| ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ ಹಸಿರು ಜೋಳದ ಹೊಲದ ಗಾಳಿಯ ತೀಡಿ … Continue reading ದೋಣಿ ಸಾಗಲಿ, ಮುಂದೆ ಹೋಗಲಿ / Doni saagali, mundhe hogali

ಲೋಕದ ಕಣ್ಣಿಗೆ / Lokada kannige

ಶೀರ್ಷಿಕೆ : ಲೋಕದ ಕಣ್ಣಿಗೆ ಕವಿ : ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ    ||ಲೋಕದ|| ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ    ||ಲೋಕದ|| ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, … Continue reading ಲೋಕದ ಕಣ್ಣಿಗೆ / Lokada kannige

ಎದೆ ತುಂಬಿ ಹಾಡಿದೆನು ಅಂದು ನಾನು / Ede thumbi haadidenu andu naanu

  ಶೀರ್ಷಿಕೆ  : ಎದೆ ತುಂಬಿ ಹಾಡಿದೆನು ಅಂದು ನಾನು ಕವಿ : ಡಾ. ಜಿ.ಎಸ್.ಶಿವರುದ್ರಪ್ಪ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ   ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು  ಕೇಳಿದಿರಿ ಅಲ್ಲಿ ನೀವು    ||ಎದೆ ತುಂಬಿ|| ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ – (೨) ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?    ||ಎದೆ ತುಂಬಿ|| ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ – (೨) ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು … Continue reading ಎದೆ ತುಂಬಿ ಹಾಡಿದೆನು ಅಂದು ನಾನು / Ede thumbi haadidenu andu naanu

ಎಲ್ಲಿ ಜಾರಿತೋ ಮನವು / Elli jaaritho manavu

ಶೀರ್ಷಿಕೆ  : ಎಲ್ಲಿ ಜಾರಿತೋಮನವು ಕವಿ : ಏನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ   ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ    ||ಎಲ್ಲಿ|| ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ – ೨ ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ    ||ಎಲ್ಲಿ|| ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೊರೆ – ೨ ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ    ||ಎಲ್ಲಿ|| ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು … Continue reading ಎಲ್ಲಿ ಜಾರಿತೋ ಮನವು / Elli jaaritho manavu

ಒಂದು ಮುಂಜಾವಿನಲಿ / Ondu munjavinali

ಶೀರ್ಷಿಕೆ  : ಒಂದು ಮುಂಜಾವಿನಲಿ ಕವಿ : ಚನ್ನವೀರ ಕಣವಿ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು ಅದಕೇ ಹಿಮ್ಮೇಳವನೆ ಸೋಸಿ ಬಹ ಸುಳಿ ಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು    ||ಒಂದು|| ಇಳಿ ಬೆಣ್ಣು ಮೈದೊಳೆದು ಮಕರಂದ ಅರಿಶಿಣದಿ ಹೂ ಮೂಡಿದ ಮಧುಮಗಳ ಹೊಲುತಿತ್ತು ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ – ೨ ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು    […]

Continue reading ಒಂದು ಮುಂಜಾವಿನಲಿ / Ondu munjavinali