ದೋಣಿ ಸಾಗಲಿ, ಮುಂದೆ ಹೋಗಲಿ / Doni saagali, mundhe hogali

pic_0535

ಶೀರ್ಷಿಕೆ : ದೋಣಿ ಸಾಗಲಿ, ಮುಂದೆ ಹೋಗಲಿ
ಕವಿ : ಕುವೆಂಪು
ಪ್ರಾಕಾರ : ಭಾವಗೀತೆ
ಭಾಷೆ : ಕನ್ನಡ

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ    ||ದೋಣಿ ಸಾಗಲಿ||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ   
||ದೋಣಿ ಸಾಗಲಿ||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿ
ರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ    ||ದೋಣಿ ಸಾಗಲಿ||


Title : Doni saagali, mundhe hogali
Author : Kuvempu
Genre(s) : Bhavageethe
Language : Kannada

Doni saagali, mundhe hogali, doora teerava serali
beesu gaalige beelu teluva tereya megade haarali

Honnagindiya hididu kaiolu hemavariya chimukisi
meghamalege bannaveeyutha yakshalokava virachisi
nodi moodanadaa diganthadi mooduvennina maisiri
ranjisutthide cheluveyaakege suprabhatava bayasiri    ||Doni saagali||

Kereya anchina mele minchina hanigalandadi himamani
minchutirpuvu mudutaitare balakomala dinamani
hasiru jolada holada gaaliya teedi tannage baruthide
hudugi haaduva matthakokila madhuravaniya taruthide    ||Doni saagali||

Doora bettada mele teluva biliya modava nodiri
adane holutha, anthe teluta doniaatavanaadiri
naavu leelamaatra jeevaru namma jeevana leelege
ninne ninnege, indu indige, irali naaleyu naalege    ||Doni saagali||

ಹಾಡಿನ ಲಿಂಕ್ / Song’s link :

Audio/video, Photography credits : Saregama South Kannada songs on YouTube , Pannaga

2 thoughts on “ದೋಣಿ ಸಾಗಲಿ, ಮುಂದೆ ಹೋಗಲಿ / Doni saagali, mundhe hogali

  1. Yentaa sOgasaada HaaDu, OdalikkU, kELalikkU sumadHura, suSHraavyaa.

    Odalu anavu maaDidavarige namaskaara , namaskaara.

    Like

Leave a comment. Author loves to hear your thoughts!