ಆಡಿಸಿ ನೋಡು ಬೀಳಿಸಿ ನೋಡು-ಬೊಂಬೆಯ ಜೀವನ ಪಾಠ 

Thanjavur Doll Edit

Read English post here : Aadisi nodu beelisi nodu-Life lessons from a doll

ನನ್ನ ಪ್ರಕಾರ ಈ ಹಾಡು ಕೇಳದೆ ಇರೋ ಕನ್ನಡಿಗರು ಕಡಿಮೆ ನೇ. ಕೆಲ ದಿನಗಳ ಹಿಂದೆ ನನ್ನ ಕಿವಿಗೆ ಈ ಹಾಡು ಒಂದು ಪ್ಲೇಲಿಸ್ಟ್ ನಲ್ಲಿ ಕೇಳಿಸಿತು. ಈ ಹಾಡಿನ ವಿಡಿಯೋ ಲಿ ಒಂದು ಬೋಂಬೆ ಜೊತೆ ಅಣ್ಣಾವ್ರು ಮತ್ತು ಒಂದು ಮಗು ಆಟಾಡೋದನ್ನ ನೋಡಬೊಹುದು. ಆ ಬೋಂಬೆಯನ್ನು ಮೂಲತಃ ತಂಜಾವೂರಿನಲ್ಲಿ ಮಾಡಲಾಗುತ್ತೆ. ಅದರ ವಿಶೇಷ ಏನಂದ್ರೆ, ಅದನ್ನ ಯಾವುದೇ ಕಡೆ ಬಗ್ಗಿಸಿದರು, ಅದು ಮತ್ತೆ ನೆಟ್ಟಗೆ ನಿಲ್ಲುತ್ತೆ. ಬೊಂಬೆಯ ಆಕಾರ ಒಂದು ದೊಡ್ಡ ಮೊಟ್ಟೆ ಥರ ಇರುತ್ತೆ.  ಅದರ ಮೇಲು ಮತ್ತು ಮಧ್ಯದ ಭಾಗ ಟೊಳ್ಳು. ಅದರ ಅಧಿಕಾಂಶ ಭಾರ ಕೆಳಗಿನ ಭಾಗದಲ್ಲಿ ಶೇಖರಿಸಿರುತ್ತೆ.  ಅದರ ಗುರುತ್ವಾಕರ್ಷಣ ಕೇಂದ್ರ ಕೆಳ ಭಾಗದ ಮಧ್ಯದಲ್ಲಿ ಇರುವುದರಿಂದ, ಅದನ್ನ ಎಷ್ಟೇ ಬಗ್ಗಿಸಿದರು ಪುನಃ ನೆಟ್ಟಗೆ ನಿಲ್ಲ ಬಲ್ಲದು. 

ಕವಿ ಚಿ. ಉದಯಶಂಕರ್ ಆ ಬೋಂಬೆಯ ಥರ ನಾವು ಇರಬೇಕು ಅಂತ  ಹೇಳುತ್ತಾರೆ. ಅಂದರೆ ಜೀವನ ಎಷ್ಟೇ ನಮ್ಮನ್ನು ಬಗ್ಗಿಸಿದರು ನಮ್ಮಲ್ಲಿ ಮತ್ತೆ ನೆಟ್ಟಗೆ ನಿಲ್ಲುವ ಸಾಮರ್ಥ್ಯ ಇರುತ್ತೆ. ಅದು ಕೂಡ ನಗು ನಗುತ ಮಾಡಬಲ್ಲೆವು. ಕೋವಿಡ್-೧೯ ಕಾಲದಲ್ಲಿ ಜಗತ್ತಿನಾಧ್ಯಂತ ಜನರು ನಾನಾಥರ ಕಷ್ಟಗಳನ್ನ ಎದುರಿಸುತ್ತಿದ್ದಾರೆ. ಒಂದು ಸ್ವಲ್ಪ ಕವಿಗಳ ಮಾತು ಕೇಳೋಣ. ಜೀವನದ ಆಟ ಚೆನ್ನಾಗಿ ಆಡೋಣ. 

ಕನ್ನಡ ಗೊತ್ತಿರೋವವರಿಗೆ ೨, ೩, ೪ ಪ್ಯಾರಾ ಸುಲಭವಾಗಿ ಅರ್ಥ ವಾಗುತ್ತೆ. ಆಂಗ್ಲ ಭಾಷೆಲಿ ಈ ಪ್ಯಾರಗಳಬಗ್ಗೆ ಬರೆದಿರುವೆ. ನಾಲ್ಕನೇ ಪ್ಯಾರಾನ ನೀವು ಹೇಗೆ ಅರ್ಥ ಮಾಡ್ಕೊಂಡಿದೀರಾ ಅಂತ ಕಾಮೆಂಟ್ ಮೂಲಕ ತಿಳಿಸಿ.


ಶೀರ್ಷಿಕೆ : ಆಡಿಸಿ ನೋಡು, ಬೀಳಿಸಿ ನೋಡು
ಕವಿ : ಚಿತ್ನಹಳ್ಳಿ ಉದಯಶಂಕರ್ 
ಪ್ರಾಕಾರ : ಚಿತ್ರಗೀತೆ ;  ಕಸ್ತೂರಿ ನಿವಾಸ 
ಭಾಷೆ : ಕನ್ನಡ

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು.
ಏನೆ ಬರಲಿ, ಯಾರಿಗು ಸೋತು, ತಲೆಯ ಬಾಗದು.
ಎಂದಿಗು ನಾನು ಹೀಗೆ ಇರುವೆ, ಎಂದು ನಗುವುದು…
ಹೀಗೆ ನಗುತಲಿರುವುದು. ।।೧।।

ಗುಡಿಸಲೆ  ಆಗಲಿ, ಅರಮನೆ ಆಗಲಿ, ಆಟ ನಿಲ್ಲದು.
ಹಿರಿಯರೆ ಇರಲಿ, ಕಿರಿಯರೆ ಬರಲಿ, ಭೇದ ತೋರದು.
ಕಷ್ಟವೋ ಸುಖವೊ ಅಳುಕದೆ ಆಡಿ, ತೂಗುತಿರುವುದು…
ತೂಗುತಿರುವುದು. ।।೨।।

ಮೈಯನೆ ಹಿಂಡಿ, ನೊಂದರು ಕಬ್ಬು, ಸಿಹಿಯ ಕೊಡುವುದು.
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು.
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು…
ದೀಪ ಬೆಳಕ ತರುವುದು. ।।೩।।

ಆಡಿಸುವಾತನ ಕೈ ಚಳಕದಲಿ, ಎಲ್ಲ ಅಡಗಿದೆ.
ಆತನ ಕರುಣೆಯ ಜೀವವ ತುಂಬಿ, ಕುಣಿಸಿ ನಲಿಸಿದೆ.
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೆ…
ಕೊನೆಯಾಗುವುದೆ. ।।೪।।

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು. ।।೧।।

ಹಾಡಿನ ಲಿಂಕ್  :

Audio/Video credits : YouTube video by SRS Media Vision Entertainment
Image/Photography credits : Google images
References : Thanjavur doll an ancient Indian art, Toys of Tanjore The Art of making Dancing Dolls

3 thoughts on “ಆಡಿಸಿ ನೋಡು ಬೀಳಿಸಿ ನೋಡು-ಬೊಂಬೆಯ ಜೀವನ ಪಾಠ 

Leave a comment. Author loves to hear your thoughts!